ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ಹಲವು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಆದೇಶಗಳನ್ನು ಹೊರಡಿಸಿದೆ.
ಶ್ರೇಯಾ ಎಸ್. ಕೆ.ಎ.ಎಸ್. — ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಾವಣೆ, ಖಾಲಿ ಹುದ್ದೆಗೆ ನಿಯೋಜನೆ.
ಡಾ. ರಮೇಶ್ ಎಸ್. ಕೆ.ಎ.ಎಸ್. — ಶಾಲಾ ಶಿಕ್ಷಣ ಇಲಾಖೆಯ ಉಪ ಆಯುಕ್ತ (ಆಡಳಿತ) ಹುದ್ದೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವರ್ಗಾವಣೆ.
-ಅನಂಜನಮೂರ್ತಿ ಡೋಂಡೂರ ಕೆ.ಎ.ಎಸ್. — ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (KIADB) ಯೋಜನಾಧಿಕಾರಿಯಾಗಿ ಬದಲಾವಣೆ.
ನಂಬರಾಜೇಂದ್ರ ಕೆ.ಎ.ಎಸ್. — ಉಪ ಆಯುಕ್ತ ಹುದ್ದೆಯಿಂದ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ.
ಜಿ. ಮಹೇಶ್ ಕೆ.ಎ.ಎಸ್. — ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪ ವಿಭಾಗದ ಉಪ ಆಯುಕ್ತರಾಗಿ ವರ್ಗಾವಣೆ.





Comments
Leave a Comment