ಪೊಲೀಸ್ ಇಲಾಖೆಯಲ್ಲಿ ಆರ್ಡಲಿರ ವ್ಯವಸ್ಥೆ ಪರಿಷ್ಕರಣೆ – ಹಿರಿಯ ಅಧಿಕಾರಿಗಳಿಗೆ ಹೊರಗುತ್ತಿಗೆ ಆಧಾರದ ಸಿಬ್ಬಂದಿ ನಿಯೋಜನೆಗೆ ಸರ್ಕಾರದ ಹೊಸ ಆದೇಶ
ಬೆಂಗಳೂರು, ಏ.6, – ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆರ್ಡಲಿರಗಳನ್ನು ಒದಗಿಸುವ ಬದಲಿಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.
ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಎಂ.ಎ. ಸಲೀಂ, ಐಪಿಎಸ್ ಅವರು ಹೊರಡಿಸಿದ ಈ ಆದೇಶದಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಆರ್ಡಲಿರ ವ್ಯವಸ್ಥೆಯನ್ನು ಸರ್ಕಾರದ ಆದೇಶ ಸಂಖ್ಯೆ ಒಇ/25/ಪಿಪಿಎಸ್/2025 (ದಿನಾಂಕ 12.01.2026)ರ ಪ್ರಕಾರ ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, 19.02.2026ರಂದು ಹೊರಡಿಸಲಾದ ಕಛೇರಿ ಆದೇಶದನ್ವಯ, ಪ್ರಸ್ತುತ ಆರ್ಡಲಿ್ರ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ.
ಹೊಸ ವ್ಯವಸ್ಥೆಯ ಪ್ರಕಾರ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆದು, ನಿಗದಿತ ಆರ್ಡಲಿ್ರ ಭತ್ಯೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಎಲ್ಲಾ ಘಟಕಾಧಿಕಾರಿಗಳಿಗೆ ಈ ಆದೇಶವನ್ನು ಪಾಲಿಸಲು ಸೂಚಿಸಲಾಗಿದ್ದು, ಅಗತ್ಯ ಕ್ರಮ ಕೈಗೊಂಡು 30.04.2026ರೊಳಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಆದೇಶವು ಪೊಲೀಸ್ ಇಲಾಖೆಯ ಆಡಳಿತದಲ್ಲಿ ಪ್ರಮುಖ ಬದಲಾವಣೆಯಾಗಿ ಪರಿಗಣಿಸಲ್ಪಟ್ಟಿದ್ದು, ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಶಿಸ್ತಿನೊಂದಿಗೆ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಹೊರಡಿಸಲಾಗಿದ್ದ ಆದೇಶಗಳಲ್ಲಿ ಇಲಾಖೆಯ ಆರ್ಡಲಿರ ವ್ಯವಸ್ಥೆಯ ಕುರಿತು ಮೂಲಭೂತ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಹಿರಿಯ ಅಧಿಕಾರಿಗಳಿಗೆ ಆರ್ಡಲಿರಗಳನ್ನು ಒದಗಿಸುವ ವಿಧಾನ ಮತ್ತು ಅದರ ನಿಯಮಾವಳಿಗಳನ್ನು ನಿರ್ಧರಿಸಲಾಗಿತ್ತು.
ಈ ಕಛೇರಿ ಆದೇಶಗಳು ಹಿಂದಿನ ಸರ್ಕಾರದ ಆದೇಶವನ್ನು ಅನುಸರಿಸಿ, ಆರ್ಡಲಿ್ರ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗಳ ಕಾರ್ಯವಿಧಾನವನ್ನು ಸ್ಪಷ್ಟಪಡಿಸಿದವು. 19.02.2026ರ ಆದೇಶದಲ್ಲಿ, ಆರ್ಡಲಿ್ರ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಹಾಗೂ ಪರ್ಯಾಯ ವ್ಯವಸ್ಥೆ ರೂಪಿಸುವ ಸೂಚನೆ ನೀಡಲಾಗಿತ್ತು.
ಈ ಆದೇಶವು ಆರ್ಡಲಿರ ವ್ಯವಸ್ಥೆಯನ್ನು ಪರಿಷ್ಕರಿಸಿ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆಯುವಂತೆ ಹಾಗೂ ನಿಗದಿತ ಆರ್ಡಲಿರ ಭತ್ಯೆಯನ್ನು ಬಳಸುವಂತೆ ನಿರ್ದೇಶಿಸಿತ್ತು.
.







Comments
Leave a Comment